Blogs from Gubbi Labs

ಡಿಸಂಬರ್ ೨೦೦೯ರ ಒಂದು ಸಂಜೆ ಹರಿವೇಸಂದ್ರದ ತೋಟದಲ್ಲಿ, ಭತ್ತದ ಕುಯ್ಲು ಆಗಿ ಬಡಿಯೋ ಕೆಲಸ ಮುಗಿತಾಯಿತ್ತು. ನಾಲ್ಕಾರು ದಿನಗಳಿಂದ ಭತ್ತವನ್ನು ರೈತರು ಬಡಿಯುತ್ತಿದ್ದರು. ಅದಕ್ಕೆ ಮಾಡಿರೊ ಕಣ ನೋಡಿ ಅಲ್ಲಿ ಒಂದು ದಿನ ಬೆಳದಿಂಗಳ ರಾತ್ರಿ ಟೆಂಟ್ ಹಾಕಿ ಉಳಿದರೆ ಅದರ ಮಜವೇ ಬೇರೆ. ಸುತ್ತಲೋ ತೆಂಗಿನ ಮರ, ಅದರನ್ಚಿನಲ್ಲಿ ಸೂರ್ಯಾಸ್ತ. ಇಷ್ಟರ ಮಧ್ಯೆ ಹಕ್ಕಿಗಳ ಚಿಲಿ ಪಿಲಿ - ಒಂದು ಕಡೆ ಟೈಲರ್ ಬರ್ಡ್, ಇನ್ನೊಂದು ಕಡೆಯಿಂದ ಕಾಪ್ಪೆರಸ್ಮಿತ್, ಇದರ ನಡುವೆ ಎರಡು ಫ್ಲೇಮ್ ಬ್ಯಾಕ್ ವೂದ್ಪೆಕೆರ್ಸ್ ಹಾರಿಹೋಯ್ತು. ಮೋಡಕವಿದ ವಾತಾವರಣದ ಜೊತೆ ತಂಗಾಳಿಯೂ ಇತ್ತು. ಇನ್ನೊಂದೆಡೆ ಹಚ್ಚ ಹಸಿರಾದ ಬಾಳೆ ಬೀಗುತ್ತಿತ್ತು. ಅದರ ಆಚೆಯೇ ಹರಿವೇಸಂದ್ರದ ಕೆರೆ ಹೇಮಾವತಿ ನದಿಯ ಕೃಪೆಯಿಂದ ತುಂಬಿ ಕೋಡಿ ಬಿದ್ದಿತ್ತು. ಕೊಡಿಬಿದ್ದ ನೀರು ರಾಯ ಕಾಲುವೆಯಲ್ಲಿ ರಭಸದಿಂದ ಹರಿಯುತ್ತಿದ್ದರೂ, ತೂಬಿನಿಂದ ಮಾತ್ರ ನೀರು ಶಾಂತವಾಗಿಯೇ ಹರಿಯುತ್ತಿತ್ತು. ಗದ್ದೆಯ ಬದುವಿಯಲ್ಲಿ ಕಪ್ಪೆಗಳ ನಾದ ಕೇಳಿ ಬರುತ್ತಿತ್ತು. ಬರೋ ಹುಣ್ಣಿಮೆ ಹೊತ್ತಿಗೆ ಬೆಳದಿಂಗಳಲ್ಲಿ ಇಲ್ಲಿ ಬಿಡಾರ ಹೂಡಲೇ ಬೇಕೆನ್ನುವನ್ತಿತ್ತು.

ಇಂಥಹ ಅನುಭವವೆ ನಮ್ಮ ಗುಬ್ಬಿ ಲ್ಯಾಬ್ಸ್ನ ಪ್ರಯೋಗ ಶಾಲೆ.